Monday, September 25, 2023

ಆಪ್ತ ಸಮಾಲೋಚನೆ


ಲೇಖಕರು
ಶೋಭಾ ಬಿ.ವಿ.
ಸಹಾಯಕ ಪ್ರಾಧ್ಯಾಪಕರು
ಕನ್ನಡ ವಿಭಾಗ
ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್
ಚಿಕ್ಕಬಳ್ಳಾಪುರ 

ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮುಖ್ಯ ಮಾನಸಿಕ ಆರೋಗ್ಯ ಕೂಡ. ಮಾನಸಿಕ ಕಾಯಿಲೆಗಳಿಂದಲೇ ಅನೇಕ ದೈಹಿಕ ರೋಗಗಳು ಕಾಡುತ್ತವೆ. ಆದರೆ ಅದರ ಸರಿಯಾದ ಅರಿವಿಲ್ಲದೆ ಕಾಯಿಲೆಗೆ ಎಷ್ಟು ಔಷಧೋಪಚಾರ ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ. ವೈದ್ಯರು ಇದನ್ನು ಗುರುತಿಸಿ ಮಾನಸಿಕ ತಜ್ಞರು ಅಥವಾ ಆಪ್ತ ಸಮಾಲೋಚಕರ ಬಳಿ ಸಲಹೆಗಾಗಿ ಸೂಚಿಸಿದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕಾರಣವಿಷ್ಟೇ ಮಾನಸಿಕ ಆರೋಗ್ಯ ತಜ್ಞರ ಹತ್ತಿರ ಹೋಗುವುದೆಂದರೆ ಏನೋ ಹಿಂಜರಿಕೆ, ಹುಚ್ಚು ಹಿಡಿದವರು ಮಾತ್ರ ಹೋಗಬೇಕಾದ ಜಾಗ ಎಂಬ ಮನೋಭಾವನೆ.

 ಆಪ್ತಸಮಾಲೋಚಕರ ಬಗೆಗೂ ಇದೇ ಧೋರಣೆ. ಅಲ್ಲದೆ ಆಪ್ತ ಸಮಾಲೋಚನೆ ಎಂದರೇನು ಎಂದು ಸರಿಯಾಗಿ ತಿಳಿದಿಲ್ಲದಿರುವುದು.

 ಆಪ್ತ ಸಮಾಲೋಚನೆ ಎಂದರೆ ಇಂಗ್ಲಿಷ್ ನಲ್ಲಿ ಕೌನ್ಸಿಲಿಂಗ್ ಎನ್ನುತ್ತಾರೆ, ಅಂದರೆ ಆಪ್ತವಾಗಿ ಸಮಾಲೋಚಿಸುವುದು. ಆಪ್ತ ಸಮಾಲೋಚನೆ ವೈದ್ಯರೇ ಮಾಡಬೇಕೆಂದೇನಿಲ್ಲ ತರಬೇತಿ ಪಡೆದ ಸಮಾಲೋಚಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಎಷ್ಟೋ ಸಮಸ್ಯೆಗಳು ಕೂತು ಪರಸ್ಪರ ಮಾತನಾಡುವುದರಿಂದ ಬಗೆ ಹರಿಯಬಲ್ಲದು. ಕೌನ್ಸಿಲರ್ ಎಂದರೆ ಆಪ್ತ ಸಲಹೆಯನ್ನು ನೀಡುವವರು. ಆಪ್ತ ಸಲಹೆಯನ್ನು ಪಡೆಯಲಿಚ್ಚಿಸುವ ಯಾವುದೇ ವ್ಯಕ್ತಿ ಸ್ವ ಇಚ್ಛೆಯಿಂದ  ಬಂದಾಗ ಮಾತ್ರ ಹೆಚ್ಚಿನ ಪ್ರಯೋಜನವಾಗುತ್ತದೆ. ಬಲವಂತದಿಂದ ಕರೆದುಕೊಂಡು ಹೋದಾಗ ಪರಿಣಾಮ ಬೀರದು. ಆಪ್ತ ಸಲಹೆಯನ್ನು ಬಯಸುವ ವ್ಯಕ್ತಿ ತನ್ನ ಧೋರಣೆ ಹಾಗೂ ವರ್ತನೆಗಳಲಿ ಬದಲಾವಣೆಗಳನ್ನು ಸ್ವ ಇಚ್ಛೆಯಿಂದ ತಂದುಕೊಂಡಾಗ ಮಾತ್ರ ಉಪಯೋಗವಾಗುತ್ತದೆ. ಬಲವಂತವಾಗಿ ಅಥವಾ ಪರೋಕ್ಷವಾಗಿ ಕೌನ್ಸೆಲಿಂಗ್ ಮಾಡಲಾಗದು.

 ಆಪ್ತ ಸಮಾಲೋಚನೆಯಲ್ಲಿ ಆಪ್ತ ಸಲಹೆಗಾರ ವ್ಯಕ್ತಿಯ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಎಲ್ಲಾ ಆಯಾಮಗಳಿಂದ ಅದನ್ನು ವಿಶ್ಲೇಷಿಸಿ ಸಲಹೆ ನೀಡುತ್ತಾರೆ. ಸಮಸ್ಯೆಯಿಂದ ನರಳುತ್ತಿರುವ ವ್ಯಕ್ತಿಗೆ ಸಾಂತ್ವನವನ್ನು ಸಮಾಧಾನವನ್ನು ನೀಡುತ್ತಾರೆ. ಇದರಿಂದ ಆತನ ಮನೋಸ್ಥೈರ್ಯ ಹೆಚ್ಚುತ್ತದೆ. ಸಮಸ್ಯೆ ತೀವ್ರವಾಗಿದ್ದಾಗ ವೈದ್ಯರ ಮೂಲಕ ಭಯ ನಿವಾರಕ ಮತ್ತು ಖಿನ್ನತೆ ನಿವಾರಕ ಕೋಪ ಅಥವಾ ಅಕ್ರಮಣಶೀಲತೆಯನ್ನು ಕುಗ್ಗಿಸಬಲ್ಲ ಔಷಧಿಗಳನ್ನು ನೀಡಲಾಗುತ್ತದೆ. ವ್ಯಕ್ತಿಯ ಮನಸ್ಸಿನಾಳದಲ್ಲಿ ಇರಬಹುದಾದ ನಕಾರಾತ್ಮಕ ಆಲೋಚನೆಗಳನ್ನು ಹೋಗಲಾಡಿಸಿ ಸಕಾರಾತ್ಮಕವಾಗಿ ಆಲೋಚಿಸುವಂತೆ ಪ್ರೇರೇಪಿಸುತ್ತಾರೆ.

 ಕೀಳರಮೆಯನ್ನು ತಗ್ಗಿಸಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಒಬ್ಬ ಆಪ್ತ ಸಮಾಲೋಚಕ ಮಾಡಬಲ್ಲ. ಅವನ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬಲ್ಲ ನಿರಾಶವಾದಿಯನ್ನು ಆಶಾವಾದಿಯವನಾಗಿ ಪರಿವರ್ತಿಸಬಲ್ಲ. ಕೌನ್ಸಿಲರ್, ವ್ಯಕ್ತಿಯಲ್ಲಿ ಭರವಸೆಯನ್ನು ಮೂಡಿಸಿ ಹೊಸ ದಿಕ್ಕನ್ನೇ ತೋರಿಸಬಲ್ಲ. ವ್ಯಕ್ತಿ ವ್ಯಕ್ತಿಗಳ ನಡುವಿನ ಬಿರುಕನ್ನು ದೂರ ಮಾಡಬಲ್ಲ ಹೇಗೆಂದರೆ ಗಂಡ -ಹೆಂಡತಿ, ತಂದೆ-ತಾಯಿ-ಮಕ್ಕಳು, ಸೋದರ ಸೋದರಿಯರು ಅಥವಾ ಸಹೋದ್ಯೋಗಿಗಳ ನಡುವೆ ಸಂಬಂಧದಲ್ಲಿ ಬಿರುಕು ಮೂಡಿದಾಗ ಅವರಲ್ಲಿನ ಅಪಾರ್ಥಗಳನ್ನು ದೂರ ಮಾಡುವುದು ಕೂಡ ಸಾಧ್ಯವಾಗುವುದು. ಒಂಟಿತನದಿಂದ ನರಳುತ್ತಿರುವ ವ್ಯಕ್ತಿಗೆ ಕೂಡ ಸಾಕಷ್ಟು ಪ್ರಯೋಜನಕಾರಿಯಾಗಬಲ್ಲದು .

 ವಾಸ್ತವಿಕ ಸತ್ಯವನ್ನು ಅರ್ಥ ಮಾಡಿಕೊಂಡು ಅದಕ್ಕೆ ಹೊಂದಿಕೊಂಡು ಬದುಕು ನಡೆಸಲು ಆಪ್ತ ಸಲಹೆ ಸಹಾಯ ಮಾಡಬಲ್ಲದು. ಇವಿಷ್ಟೇ ಅಲ್ಲದೆ ಜೀವನ ಕೌಶಲಗಳನ್ನು ಸುಧಾರಿಸುವಲ್ಲಿ ಮತ್ತು ಉದ್ದೇಶಿತ ಗುರಿ ಮುಟ್ಟುವಲ್ಲಿ ಖಂಡಿತವಾಗಿಯೂ ಸಮಲೋಚನೆ ಮಾರ್ಗದರ್ಶನ ನೀಡಬಲ್ಲದು.

No comments:

Post a Comment

AI IN CRYPTOGRAPHY

Written by: PALLAVI V (Final year BCA) 1.     ABSTRACT: The integration of AI in Cryptography represents a significant advancement in ...