ಲೇಖಕರು
ಅಂಬರೀಷ್. ಎ
ಪ್ರಾಧ್ಯಾಪಕರು, ಕನ್ನಡ ವಿಭಾಗ
ನಾಗಾರ್ಜುನ ಕಾಲೇಜು.
ಭಾರತದ ಪ್ರಮುಖ ಎಂಜಿನಿಯರ್ ಗಳಲ್ಲಿ ಒಬ್ಬರಾದ ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮಹಾನ್ ವ್ಯಕ್ತಿ. ಅವರ ಜೀವನ ಮತ್ತು ಸಾಧನೆಗಳು ಯುವಜನರಿಗೆ ಸದಾ ಪ್ರೇರಣೆಗೆ ಕಾರಣವಾಗಿದೆ. ನೈತಿಕತೆ, ಪರಿಶ್ರಮ, ಮತ್ತು ದೃಢ ಸಂಕಲ್ಪದ ಮನೊಭಾವ ಅವರನ್ನು ವಿಶೇಷವಾಗಿ ಗುರುತಿಸಲಾಗಿದೆ.
ಅವರ ಅಭಿವೃದ್ಧಿ ಕಾರ್ಯಗಳು ಕರ್ನಾಟಕದ ಮೂಲಕ ಭಾರತದ ಹಲವಾರು ಪ್ರದೇಶಗಳಲ್ಲಿ ಅನುಸರಣೆಯಾಗಿದೆ. ಹಳ್ಳಿಗಳಲ್ಲಿ ನೀರು ಸಂಗ್ರಹಿಸುವ ತಟಸ್ಥ ಅಣೆಕಟ್ಟನ್ನು ಕಟ್ಟಲು ಹಲವಾರು ಯೋಜನೆಗಳನ್ನು ರಚಿದ್ದಾರೆ. ಅವರ ಸಾಧನೆಗಳಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು, ಭದ್ರಾವತಿ ಉಕ್ಕಿನ ಕಾರ್ಖಾನೆ ನಿರ್ಮಾಣ ಇವೆರಡು ಪ್ರಮುಖವಾದದ್ದು. ತಮ್ಮ ಸೇವಾನ್ವಯದ ಅವಧಿಯಲ್ಲಿ, ಕರ್ನಾಟಕದ ಅಸಂಖ್ಯಾತ ಅಭಿವೃದ್ಧಿ ಯೋಜನೆಗಳಿಗೆ ಕಾರಣರಾದವರು ಮತ್ತು ಭಾರತದ ಉದ್ಯಮ ವ್ಯಾಪಾರದ ರಂಗದಲ್ಲಿ ಪುನಃ ನವೀಕರಣ ಮಾಡಿದರು. ಅವರು ಭಾರತ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ ಮತ್ತು ಅವರ ಹುಟ್ಟಿದ ದಿನವನ್ನು(15 September) ಇಂಜನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ.
ಅವರ ಬಗ್ಗೆ ಹೆಚ್ಚು ತಿಳಿಯಲು ಕೆಳಗಿರುವ ಕನ್ನಡ ಪುಸ್ತಕಗಳನ್ನು ಓದಬಹುದು
೧. ನನ್ನ ವೃತ್ತಿಜೀವನದ ನೆನಪುಗಳು
- ಸರ್ ಎಂ ವಿಶ್ವೇಶ್ವರಯ್ಯ
೨. ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಜೀವನ-ಸಾಧನೆ
- ತಿ ತಾಶರ್ಮ
೩. ಭಾರತರತ್ನ ಸರ್ ಎಂ.ವಿ : ಸರ್ ಎಂ.ವಿ ವಿಶ್ವೇಶ್ವರಯ್ಯ
- ಡಿ ಎಸ್ ಜಯಪ್ಪಗೌಡ
೪. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಜೀವನ-ಸಾಧನೆ
- ನಾರಾಯಣರಾವ್ ವಿ ಎಸ್
No comments:
Post a Comment